005 ಕ್ಷೌರಿಕ ವೃತ್ತಿಯ ಉಗಮ- ಲೇಖನ ಶ್ರೀ ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ
ಕ್ಷೌರಿಕ ವೃತ್ತಿಯ ಉಗಮ ಲೇಖನ ಶ್ರೀ ವೆಂಕಟಾಚಲಪತಿ.ಪಿ.ಬಿ.ದಾವಣಗೆರೆ ಸೌಂದರ್ಯ ಪ್ರಜ್ಞೆಯು ಮಾನವನ ಒಂದು ಮುಖ್ಯ ಗುಣ.. ಮನುಷ್ಯನನ್ನು ಸುಂದರವಾಗಿ ಕಾಣುಸುವಲ್ಲಿ ಆವನ ಚರ್ಮ ಹಾಗು ಕೂದಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯನು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ದೇಹಿಕ ಹಿಂಸೆಯಿಲ್ಲದೆ ಚರ್ಮಕ್ಕಿಂತ ಕೂದಲುಗಳನ್ನು ಹಚ್ಚು ಬಳಸುತ್ತಾನೆ. ಕೂದಲನ್ನು ತೆಗೆದು , ಕತ್ತರಿಸಿ , ಶೃಂಗರಿಸಿ ತನ್ನ ಸೇವೆಯನ್ನು ನೀಡುವ ವೃತ್ತಿಯೇ ಕ್ಷೌರಿಕ ವೃತ್ತಿ , ಕ್ಷೌರಿಕ ವೃತ್ತಿಯು ಇತರ ಸಾಮಾನ್ಯ ವೃತ್ತಿ ಗಳಂತೆ ಅಲ್ಲ. ಇದು ತನ್ನದೇ ಆದ ವಿಶೇಷತೆ ಹಾಗೂ ಪ್ರಮು ಖ್ಯತೆ ಗಳನ್ನು ಹೊಂದಿದೆ. ಕ್ಷೌರಿಕ ರ ಇತಿಹಾಸವು ತುಂಬಾ ಪ್ರಾಚೀನ ವಾಗಿ ಮತ್ತು ಆಸಕ್ತಿದಾಯಕವಾಗಿದೆ. ಶಿಲಾಯುಗದಲ್ಲಿ ಮಾನವರು ತಮ್ಮ ರಕ್ಷಣೆಯ ಉದ್ದೇಶಕ್ಕಾಗಿ ಹಾಗೂ ನಿರಂತರ ಆಹಾರ ಲಭ್ಯತೆಗಾಗಿ ಗುಂಪುಗ ಳಲ್ಲಿ ವಾಸಿಸುತ್ತಿ ದ್ದರು. ಅವರು ಪ್ರಾರಂಭದಲ್ಲಿ ಅಲೆಮಾರಿಗಳಾಗಿ ನಂತರ ಪಶು ಸಂಗೋಪನೆಗಾಗಿ ಹಾಗೂ ವ್ಯವಸಾಯಕ್ಕಾಗಿ ಒಂದು ಕಡೆ ವಾಸಿಸಲು ಪ್ರಾರಂಬಿಸಿದರು. ತಮ್ಮ ರಕ್ಷಣೆಯ ದೃಷ್ಟಿಯಿಂದ ಅವರು ಗುಂಪುಗ ಳಲ್ಲಿ ವಾಸಿಸಲು ಪ್ರಾರಂಭಿಸಿದರು. ಗುಂಪುಗಳ ಗಾತ್ರವು ಹೆಚ್ಚಾದಾಗ ಗುಂಪಿನ ಕೆಲಸ ...