AI (ಕೃತಕ ಬುದ್ಧಿಮತ್ತೆ) ಮತ್ತು ಕ್ಷೌರಿಕ ವೃತ್ತಿ . ಲೇಖನ ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ. ಫೋ 9901196772
AI (ಕೃತಕ ಬುದ್ಧಿಮತ್ತೆ) ಮತ್ತು ಕ್ಷೌರಿಕ ವೃತ್ತಿ ಇಂದಿನ 21ನೇ ಶತಮಾನದಲ್ಲಿ ಕ್ಷೌರ ಮತ್ತು ಸಲೂನ್ ವೃತ್ತಿ ಕೇವಲ ಸಾಂಪ್ರದಾಯಿಕ ಕೇಶ ವಿನ್ಯಾಸಕ್ಕೆ ಸೀಮಿತವಾಗಿರುವುದಿಲ್ಲ. ತಂತ್ರಜ್ಞಾನ ವೇಗವಾಗಿ ಬೆಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೌರ ವೃತ್ತಿಯನ್ನು ಸಂಪೂರ್ಣವಾಗಿ ಹೊಸ ಹಾದಿಯ ಕಡೆಗೆ ಕೊಂಡೊಯ್ಯುತ್ತಿದೆ. ಗ್ರಾಹಕ ಸೇವೆಯಿಂದ ಹಿಡಿದು ವ್ಯವಹಾರ ನಿರ್ವಹಣೆವರೆಗೂ, AI ಈಗ ಸಲೂನ್ ಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. AI ಯ ಮೊದಲ ಮಹತ್ವದ ಬಳಕೆ ಸ್ವಯಂ ನಿಯೋಜಿತ ಬುಕ್ಕಿಂಗ್ ಮತ್ತು ಗ್ರಾಹಕ ನಿರ್ವಹಣಾ ವ್ಯವಸ್ಥೆ ಗಳಲ್ಲಿ ಕಾಣಲು ಸಾಧ್ಯ. AI ಆಧಾರಿತ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಮುಂಗಡ ಸಮಯ ನೀಡುವುದು. ಸೇವೆಯ ಅವಧಿಯನ್ನು ಅಂದಾಜಿಸುವುದು, ರದ್ದುಗೊಂಡ ಅಪಾಯಿಂಟ್‌ಮೆಂಟ್‌ಗಳನ್ನು ಪುನಃ ವ್ಯವಸ್ಥೆ ಮಾಡುವುದು ಮೊದಲಾದ ಕಾರ್ಯಗಳನ್ನು ಸುಲಭಗೊಳಿಸುತ್ತವೆ. ಇದರಿಂದ ಸಮಯದ ದುರ್ವ್ಯಯ ಕಡಿಮೆಯಾಗುತ್ತದೆ ಮತ್ತು ಸೇವಾ ಗುಣಮಟ್ಟ ಹೆಚ್ಚುತ್ತದೆ. ಇಂದಿನ ಆಧುನಿಕ ಸ್ಯಾಲೂನ್‌ಗಳಲ್ಲಿ ವರ್ಚುವಲ್ ಟ್ರೈ-ಆನ್ (Virtual Try-On) ಮತ್ತು AI ಸ್ಟೈಲ್ ವಿಶ್ಲೇಷಣಾ ಉಪಕರಣಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಗ್ರಾಹಕರು ತಮ್ಮ ಚಿತ್ರವನ್ನು ಅಪ್‌ಲೋಡ್ ಮಾಡಿ ವಿವಿಧ ಹೇರ್‌ಸ್ಟೈಲ್, ದಾಡಿ ಶೈಲಿ, ಕೂದಲು ಬಣ್ಣಗಳನ್ನು ನೈಜವಾಗಿ ಪ್ರಯೋಗಿಸಿ ನೋಡಬಹುದು. ಮುಖದ ಆಕಾರ, ಕ...