006 ಕ್ಷೌರಿಕರು ಹಾಗೂ ಶಸ್ತ್ರಚಿಕಿತ್ಸೆ. ಲೇಖನ ವೆಂಕಟಾಚಲಪತಿ. ಪಿ. ಬಿ. ದಾವಣಗೆರೆ 99011 96772
ಕ್ಷೌರಿಕರು ಹಾಗೂ ಶಸ್ತ್ರಚಿಕಿತ್ಸೆ. ಭಾರತದಲ್ಲಿ ಶಸ್ತ್ರಚಿಕಿತ್ಸೆಯ ಪರಿಕಲ್ಪನೆ ಹೊಸದೇನಲ್ಲ ತ್ರಿಮೂರ್ತಿಗಳಲ್ಲಿ ಒಬ್ಬರಾದ ಆದಿ ಶಂಕರನು ತನ್ನ ಮಗನಾದ ಗಣೇಶನಿಗೆ ಆನೆಯ ತಲೆಯನ್ನು ಜೋಡಿಸಿದನೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದೇ ರೀತಿ ರಾವಣನು ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸುವಾಗ ಶಿವನು ಪ್ರತ್ಯಕ್ಷವಾಗದಿದ್ದಾಗ ಒಂಬತ್ತು ಬಾರಿ ತನ್ನ ತಲೆಗಳನ್ನು ಒಂದೊಂದಾಗಿ ಕತ್ತರಿಸಿಕೊಳ್ಳುತ್ತಾನೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಆತನ ಎಲ್ಲಾ ತಲೆಗಳನ್ನು ಜೋಡಿಸಿ ಬೇಡಿದ ವರವನ್ನು ನೀಡುತ್ತಾನೆ ಅಂದಿನಿಂದ ರಾವಣನು ದಶಕಂಠನಾಗುತ್ತಾನೆ. ಅಶ್ವಿನಿ ದೇವತೆಗಳು ಯಾಗದ ವೇಳೆಯಲ್ಲಿ ದೇವತೆಗಳ ತಲೆಗಳನ್ನು ಜೋಡಿಸಿದರೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ವಿಶ್ವಾಮಿತ್ರರ ಮಗನಾದ ಸುಶ್ರುತರವರು ಇತರರೊಂದಿಗೆ ದೇವವೈದ್ಯರಾದ ಧನ್ವಂತರಿಯವರ ಬಳಿ ಆಯುರ್ವೇದದ ಜ್ಞಾನವನ್ನು ಪಡೆದರೆಂದು ನಂತರ ಸುಶ್ರುತರವರು ತನ್ನ ಅಪಾರವಾದ ಜ್ಞಾನವನ್ನು ತಮ್ಮ "ಸುಶ್ರುತ ಸಂಹಿತೆ" ಎಂಬ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ. ಸುಶ್ರುತ ಸಂಹಿತವು ನಾಲ್ಕು ವೇದಗಳ ಒಂದು ಭಾಗ ಎಂದು ನಂಬಲಾಗಿದೆ ಇದನ್ನು ಸುಶ್ರುತರು ಸುಮಾರು ಕ್ರಿಸ್ತಪೂರ್ವ 600 ರಲ್ಲಿ ತನ್ನ ಗುರು ಧನ್ವಂತರಿಯವರ ಮತ್ತು ಅವರ ಪೂರ್ವಜರಿಂದ ಕಲಿತ ಜ್ಞಾನವನ್ನು ಸಂಗ್ರಹಿಸಿ...