006 ಕ್ಷೌರಿಕರು ಹಾಗೂ ಶಸ್ತ್ರಚಿಕಿತ್ಸೆ. ಲೇಖನ ವೆಂಕಟಾಚಲಪತಿ. ಪಿ. ಬಿ. ದಾವಣಗೆರೆ 99011 96772
ಕ್ಷೌರಿಕರು ಹಾಗೂ ಶಸ್ತ್ರಚಿಕಿತ್ಸೆ.
ಭಾರತದಲ್ಲಿ ಶಸ್ತ್ರಚಿಕಿತ್ಸೆಯ ಪರಿಕಲ್ಪನೆ ಹೊಸದೇನಲ್ಲ ತ್ರಿಮೂರ್ತಿಗಳಲ್ಲಿ ಒಬ್ಬರಾದ ಆದಿ ಶಂಕರನು ತನ್ನ ಮಗನಾದ ಗಣೇಶನಿಗೆ ಆನೆಯ ತಲೆಯನ್ನು ಜೋಡಿಸಿದನೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದೇ ರೀತಿ ರಾವಣನು ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸುವಾಗ ಶಿವನು ಪ್ರತ್ಯಕ್ಷವಾಗದಿದ್ದಾಗ ಒಂಬತ್ತು ಬಾರಿ ತನ್ನ ತಲೆಗಳನ್ನು ಒಂದೊಂದಾಗಿ ಕತ್ತರಿಸಿಕೊಳ್ಳುತ್ತಾನೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಆತನ ಎಲ್ಲಾ ತಲೆಗಳನ್ನು ಜೋಡಿಸಿ ಬೇಡಿದ ವರವನ್ನು ನೀಡುತ್ತಾನೆ ಅಂದಿನಿಂದ ರಾವಣನು ದಶಕಂಠನಾಗುತ್ತಾನೆ. ಅಶ್ವಿನಿ ದೇವತೆಗಳು ಯಾಗದ ವೇಳೆಯಲ್ಲಿ ದೇವತೆಗಳ ತಲೆಗಳನ್ನು ಜೋಡಿಸಿದರೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ.
ವಿಶ್ವಾಮಿತ್ರರ ಮಗನಾದ ಸುಶ್ರುತರವರು ಇತರರೊಂದಿಗೆ ದೇವವೈದ್ಯರಾದ ಧನ್ವಂತರಿಯವರ ಬಳಿ ಆಯುರ್ವೇದದ ಜ್ಞಾನವನ್ನು ಪಡೆದರೆಂದು ನಂತರ ಸುಶ್ರುತರವರು ತನ್ನ ಅಪಾರವಾದ ಜ್ಞಾನವನ್ನು ತಮ್ಮ "ಸುಶ್ರುತ ಸಂಹಿತೆ" ಎಂಬ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ. ಸುಶ್ರುತ ಸಂಹಿತವು ನಾಲ್ಕು ವೇದಗಳ ಒಂದು ಭಾಗ ಎಂದು ನಂಬಲಾಗಿದೆ ಇದನ್ನು ಸುಶ್ರುತರು ಸುಮಾರು ಕ್ರಿಸ್ತಪೂರ್ವ 600 ರಲ್ಲಿ ತನ್ನ ಗುರು ಧನ್ವಂತರಿಯವರ ಮತ್ತು ಅವರ ಪೂರ್ವಜರಿಂದ ಕಲಿತ ಜ್ಞಾನವನ್ನು ಸಂಗ್ರಹಿಸಿದರು. ಸುಶ್ರುತರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನು ಕಲಿಸುತ್ತಿದರು ಎಂದು ಸುಶ್ರುತ ಸಂಹಿತದಲ್ಲಿ ಅವರು ಕೆನ್ನೆಯ ಚರ್ಮ ತೆಗೆದು ಅದರಿಂದ ಕತ್ತರಿಸಿದ ಮೂಗಿನ ಪುನರ್ನಿರ್ಮಾಣ, ಕತ್ತರಿಸಿದ ಕಿವಿಯ ದುರಸ್ತಿ, ಕಿವಿಯೋಲೆಗಾಗಿ ಕಿವಿಯನ್ನು ಚುಚ್ಚುವುದು,ಕತ್ತರಿಸಿದ ತುಟಿಯ ದುರಸ್ತಿ, ಚರ್ಮದ ಕಸಿ, ಗಾಯದ ಆರೈಕೆ ಮತ್ತು ಗಾಯವನ್ನು ಗುಣಪಡಿಸುವ ವಿವರಿಸಿದ್ದಾರೆ. ಸುಶ್ರುತರನ್ನು "ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ" ಮತ್ತು "ಹಿಪ್ಪೊಕ್ರೇಟ್ಸ್" ಎಂದು ಸರಿಯಾಗಿ ಕರೆಯಲಾಗುತ್ತದೆ.
ಭಾರತದಲ್ಲಿ ಉಚ್ಪ್ರಾಯ ಸ್ಥಿತಿಯಲ್ಲಿದ್ದ ಶಸ್ತ್ರಚಿಕಿತ್ಸೆಯ ಜ್ಞಾನವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡ ಬಗ್ಗೆ
ಹಲವಾರು ಅನುಮಾನಗಳಿವೆ. ಸುಮಾರು ಕ್ರಿಸ್ತಶಕ 1780 ರಿಂದ 1784 ರ ಸುಮಾರಿನಲ್ಲಿ ಮೈಸೂರಿನ ಹೈದರ್ ಆಲಿ ಹಾಗೂ ಬ್ರಿಟಿಷರ ವಿರುದ್ಧ ಪದೇ ಪದೇ ಯುದ್ಧ ನಡೆಯುತ್ತಿದ್ದವು. ಒಮ್ಮೆ ಬ್ರಿಟಿಷ್ ಸೇನಾ ಅಧಿಕಾರಿ ಕರ್ನಲ್ ಕೂಟ್ ಯುದ್ಧದಲ್ಲಿ ಸೋತು ಮೈಸೂರಿನ ಸೈನಿಕರ ಕೈಯಲ್ಲಿ ಸೆರೆಯಾಗುತ್ತಾನೆ. ಹೈದರಾಲಿಯು ಅವನನ್ನು ಅವಮಾನಿಸಲು ತನ್ನ ಖಡ್ಗದಿಂದ ಅವನ ಮೂಗನ್ನು ಕತ್ತರಿಸಿ ಕಳಿಸುತ್ತಾನೆ. ಹೈದರಾಲಿಯ ಆಡಳಿತ ಪ್ರದೇಶದಿಂದ ಹೊರಗೆ ಹೊರಟ ಬ್ರಿಟಿಷ್ ಅಧಿಕಾರಿಯು ಬೆಳಗಾವಿಯ ಬಳಿ ಬರುತ್ತಾನೆ. ಅಲ್ಲಿಯ ಒಬ್ಬ ಕ್ಷೌರಿಕನು ಈ ಅಧಿಕಾರಿಗೆ ಮೂಗು ಹೇಗೆ ತುಂಡಾಯಿತು ಎಂದು ಕೇಳಿದಾಗ ಅದು ಕಲ್ಲು ತಗುಲಿ ತುಂಡಾಯಿತು ಎಂದು ಸುಳ್ಳು ಹೇಳುತ್ತಾನೆ. ಕ್ಷೌರಿಕನು ಅವನ ಮಾತನ್ನು ನಂಬದೇ ನಿಜ ಹೇಳು ಎಂದು ಕೇಳಿದಾಗ ಕರ್ನಲ್ ಕೂಟ್ ನು ಅನಿವಾರ್ಯವಾಗಿ ಯುದ್ಧದಲ್ಲಿ ಸೋತು ಈ ಸ್ಥಿತಿ ಬಂದಿದೆ ಎಂದು ನಿಜ ಹೇಳುತ್ತಾನೆ. ನಂತರ ಮುಂದೆ ಏನು ಮಾಡುವೆ ಎಂದು ಕೇಳಿದಾಗ ಬ್ರಿಟಿಷ್ ಅಧಿಕಾರಿಯು ನಾನು ಇಂಗ್ಲೆಂಡಿಗೆ ಹಿಂತಿರುಗುತ್ತೇನೆ ಎಂದು ಉತ್ತರಿಸುತ್ತಾನೆ. ನಿನ್ನ ಮೂಗನ್ನು ಇಲ್ಲಿಯೇ ಸರಿಪಡಿಸಬಹುದು ಎಂದು ವೈದ್ಯನಾದ ಕ್ಷೌರಿಕನು ಹೇಳಿದಾಗ ಬ್ರಿಟಿಷ್ ಅಧಿಕಾರಿಯು ಅವನ ಮಾತನ್ನು ನಂಬುವುದಿಲ್ಲ. ಬೇರೆ ದಾರಿಯಿಲ್ಲದೆ ಚಿಕಿತ್ಸೆಗೆ ಒಪ್ಪಿಗೆ ನೀಡುತ್ತಾನೆ. ನಂತರ ವೈದ್ಯನು ಹಲವು ದಿನಗಳ ಚಿಕಿತ್ಸೆಯನ್ನು ನೀಡುತ್ತಾನೆ. ಚಿಕಿತ್ಸೆ ಮುಗಿದ ನಂತರ ಮುಲಾಮನ್ನು ನೀಡಿ ಹಲವು ದಿನ ಬಳಸಲು ಹೇಳಿ ಕಳಿಸುತ್ತಾನೆ .15 ದಿನ ಮುಲಾಮನ್ನು ಹಚ್ಚಿದ ಬಳಿಕ ಅವನ ಮೂಗು ಸಂಪೂರ್ಣವಾಗಿ ಗುಣಮುಖವಾಗುತ್ತದೆ. ವೈದ್ಯನು ನೀಡಿದ ಚಿಕಿತ್ಸೆಯ ಬಗ್ಗೆ ಸುಮಾರು ಮೂವತ್ತು ಪುಟಗಳಲ್ಲಿ ವಿವರಣೆಯನ್ನು ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ ಎಂದು ತಿಳಿಯುತ್ತದೆ. ನಂತರ ತನ್ನ ದೇಶವಾದ ಇಂಗ್ಲೆಂಡ್ ಗೆ ಹಿಂದುರಿಗುತ್ತಾನೆ.
ಇಂಗ್ಲೆಂಡಿಗೆ ಹಿಂದುರಿಗಿ ಮೂರು ತಿಂಗಳ ನಂತರ ಕರ್ನಲ್ ಕೂಟ್ ಬ್ರಿಟನ್ ನ ಸದನದಲ್ಲಿ ಎಲ್ಲರಿಗೂ ಒಂದು ಪ್ರಶ್ನೆಯನ್ನು ಕೇಳುತ್ತಾನೆ. ನನ್ನ ಮೂಗು ಭಾರತದಲ್ಲಿ ಯುದ್ಧದಲ್ಲಿ ಕತ್ತರಿಸಲಾಗುತ್ತು ಎಂದು ನೀವು ನಂಬುತ್ತೀರಾ ಎಂದು ಕೇಳುತ್ತಾನೆ. ಸದನದಲ್ಲಿ ಇದ್ದ ಎಲ್ಲರೂ ಆಶ್ಚರ್ಯದಿಂದ ನೋಡಿ ಇಲ್ಲ ಎಂದು ಉತ್ತರಿಸುತ್ತಾರೆ. ಆಗ ಈ ಅಧಿಕಾರಿಯು ನನ್ನ ಮೂಗು ಯುದ್ಧದಲ್ಲಿ ಕತ್ತರಿಸಲ್ಪಟ್ಟಿತ್ತು ಆದರೆ ಭಾರತದ ಒಬ್ಬ ಸಾಮಾನ್ಯ ಕ್ಷೌರಿಕ ಹಾಗೂ ವೈದ್ಯ ಇದನ್ನು ಜೋಡಿಸಿ ಸರಿಪಡಿಸಿದ್ದಾನೆ. ಭಾರತದಲ್ಲಿ ವೈದ್ಯಶಾಸ್ತ್ರವು ನಮಗಿಂತ ಬಹಳ ಮುಂದುವರಿದಿದೆ ಎಂದು ಹೇಳುತ್ತಾನೆ. ನಂತರ ಶೀಘ್ರದಲ್ಲೇ ಒಂದು ನಿಯೋಗದ ಕೆಲವು ಸದಸ್ಯರು ಭಾರತದ ಗುರುಕುಲಗಳಲ್ಲಿ ಸೇರಿಕೊಂಡು ಪ್ಲಾಸ್ಟಿಕ್ ಸರ್ಜರಿಯ ತಂತ್ರವನ್ನು ಕಲಿಯುತ್ತಾರೆ.
ಅವರಲ್ಲಿ ಒಬ್ಬ ಥಾಮಸ್ ಕ್ರೂಸೋ ಎಂಬ ವ್ಯಕ್ತಿ ಭಾರತದಲ್ಲಿ ಶಸ್ತ್ರ ಚಿಕಿತ್ಸೆ ಕಲಿತು ಇಂಗ್ಲೆಂಡ್‌ಗೆ ಹೋದ ನಂತರ ಅಲ್ಲಿಯ ಜನರಿಗೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲು ಪ್ರಾರಂಭಿಸುತ್ತಾನೆ. ಅವನು ತನ್ನ ದಿನಚರಿಯಲ್ಲಿ ತಾನು ಈ ತಂತ್ರಗಳನ್ನು ಹೇಗೆ ಕಲಿತೆ ಎಂದು ಬರೆದಿದ್ದಾನೆ. ಅದರಲ್ಲಿ ತಾನು 'ಕ್ಷೌರಿಕ' ಸಮುದಾಯಕ್ಕೆ ಸೇರಿದ ವ್ಯಕ್ತಿಯು ಪ್ಲಾಸ್ಟಿಕ್ ಸರ್ಜರಿಯ ತಂತ್ರವನ್ನು ಕಲಿಸಿದನು ಎಂದು ಬರೆದುಕೊಂಡಿದ್ದಾರೆ. ಅವನು ತನ್ನ ದಿನಚರಿಯಲ್ಲಿ ಒಂದು ಘಟನೆಯನ್ನು ಹೀಗೆ ವಿವರಿಸುತ್ತಾನೆ.
ಕ್ರಿಸ್ತಶಕ 1792 ರಲ್ಲಿ ಒಬ್ಬ ಮರಾಠ ಸೈನಿಕನು ಕತ್ತರಿಸಿದ ಕೈಯೊಂದಿಗೆ ನನ್ನ ಗುರುಗಳ ಬಳಿಗೆ ಬಂದು ಅದನ್ನು ಸರಿಪಡಿಸಲು ವಿನಂತಿಸುತ್ತಾನೆ. ಗುರುಗಳು ಆ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಲು ನನಗೆ ಹೇಳುತ್ತಾರೆ. ನಾನು ಗುರುಗಳ ನಿರ್ದೇಶನದಲ್ಲಿ ಯಶಸ್ವಿಯಾಗಿ ಮಾಡಿ ಮುಗಿಸುತ್ತೇನೆ.
ಈಗೆ ಕಲಿತ ಬ್ರಿಟಿಷ್ ವ್ಯಕ್ತಿ ಥಾಮಸ್ ಕ್ರೂಸೋ ತನಗೆ ಪ್ಲಾಸ್ಟಿಕ್ ಸರ್ಜರಿ ಕಲಿಸಿದ ಗುರುಗಳು ನನ್ನಿಂದ ಯಾವುದೇ ಶುಲ್ಕವನ್ನು ಪಡೆಯಲಿಲ್ಲ ಎಂದು ಅವರು ಆಶ್ಚರ್ಯದಿಂದ ಬರೆದಿದ್ದಾರೆ. ಥಾಮಸ್ ಕ್ರೂಸೋ ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ಶಸ್ತ್ರಚಿಕಿತ್ಸಾ ಶಾಲೆಯನ್ನು ಪ್ರಾರಂಭಿಸಿದನು, ಅಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸಾ ತಂತ್ರವನ್ನು ಕಲಿಸುತ್ತಾರೆ.
ವಿಪರ್ಯಾಸವೆಂದರೆ ಥಾಮಸ್ ಕ್ರೂಸೋ ಅವರು ಇಂಗ್ಲೆಂಡ್‌ನಲ್ಲಿ ಪ್ರಾರಂಭಿಸಿದ ಶಸ್ತ್ರಚಿಕಿತ್ಸಾ ಶಾಲೆಯ ವಿವರಗಳು ದೊರೆಯುತ್ತವೆ ಆದರೆ ಅವರು ಶಸ್ತ್ರಚಿಕಿತ್ಸೆ ಕಲಿತ ಆ ಭಾರತೀಯ 16 ಜನರ ಹೆಸರುಗಳು ಈ ಪುಸ್ತಕದಿಂದ ಕಾಣೆಯಾಗಿವೆ.ಆದ್ದರಿಂದ ಭಾರತದ ಇಂತಹ ಅಮೂಲ್ಯ ಕೊಡುಗೆಗಳನ್ನು ಜಗತ್ತು ಮರೆತಿದೆ ಎಂದು ಸ್ಪಷ್ಟವಾಗುತ್ತದೆ.
ಇದು ನಮ್ಮ ದೇಶದ ಶ್ರೀಮಂತ ಸಂಪ್ರದಾಯವನ್ನು ಸೂಚಿಸುತ್ತದೆ. ಅಲ್ಲಿ ಶಿಕ್ಷಣದ ವ್ಯಾಪಾರಿಕರಣವಿರಲಿಲ್ಲ. ಎಲ್ಲಾ ಜನರು ತಮ್ಮ ಜಾತಿ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಸಮಾನವಾಗಿ ಕಲಿಯುವ ಅವಕಾಶವನ್ನು ಹೊಂದಿದ್ದರು. ಗುರುಕುಲಕ್ಕೆ ಪ್ರವೇಶವನ್ನು ಜಾತಿಯ ಆಧಾರದ ಮೇಲೆ ನಿರ್ಬಂಧಿಸಲಾಗಿರಲಿಲ್ಲ. ಜಾತಿಯ ಅಸಮಾನತೆಯ ಪರಿಕಲ್ಪನೆ ಪರಕೀಯರ ದಾಳಿಗಳಿಗಿಂತ ಮೊದಲು ಭಾರತದಲ್ಲಿ ಇರಲಿಲ್ಲ ಎಂಬುದು ನಮಗೆ ಸ್ಪಷ್ಟವಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ