012 ಕ್ಷೌರಿಕರು ಹಾಗೂ ಮಂಗಳವಾರದ ರಜಾದಿನ- ವೆಂಕಟಾಚಲಪತಿ.ಪಿ.ಬಿ.- ದಾವಣಗೆರೆ. 9901196772
ಕ್ಷೌರಿಕರು ಹಾಗೂ ಮಂಗಳವಾರದ ರಜಾದಿನ ವೆಂಕಟಾಚಲಪತಿ.ಪಿ.ಬಿ.- ದಾವಣಗೆರೆ. 9901196772 ಕ್ಷೌರಿಕರು ಹಾಗೂ ಮಂಗಳವಾರದ ರಜಾದಿನ ಇತ್ತೀಚಿನ ದಿನಗಳಲ್ಲಿ ಕೋರೋನಾ ಖಾಯಿಲೆಯಿಂದ ಉಂಟಾದ ಸಮಸ್ಯೆಯಿಂದ ಕಾಪಾಡುವ ಉದ್ದೇಶದಿಂದ ಸರ್ಕಾರವು ಕೆಲವು ಭಾ ನುವಾರಗಳ ಮಟ್ಟಿಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಆದೇಶ ನೀಡಿರುವದರಿಂದ ಕೆಲವು ಸಮಾಜ ಪರ ಚಿಂತಕರಿಗೆ ಕ್ಷೌರಿಕ ಅಂಗಡಿಗಳು ಮಂಗಳವಾರದ ಬದಲು ಭಾನುವಾರ ರಜೆ ಮಾಡಿದರೆ ಹೇಗೆ ಎಂಬ ಚಿಂತನೆಯನ್ನು ಮೂಡಿಸಿದೆ.ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ಪ್ರಾರಂಭವಾಗಿದೆ. ಈ ನಿರ್ಣಯದ ಅನುಕೂಲಗಳು ಮತ್ತು ಅನಾನುಕೂಲತೆಗಳ ಬಗ್ಗೆ ಮತ್ತೋಮ್ಮೆ ಪರಿಶೀಲಿಸುವ ಸಂದರ್ಭ ಒದಗಿ ಬಂದಿದೆ. ಇದರ ಬಗ್ಗೆ ನನಗೆ ತಿಳಿದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಭಾ ನುವಾರ ರಜಾದಿನ ಮಾಡಿದರೆ ಅನುಕೂಲಗಳು: 01 . ನಮ್ಮ ಸಂಘಟನೆಗಳು ಬಲಗೊಳ್ಳುತ್ತವೆ : ನಮಲ್ಲಿ ಹೆಚ್ಚಿನ ಸಬೆ ಸಮಾರಂಭಗಳು , ಇತರೆ ಕಾರ್ಯಕ್ರಮಗಳು ಬಾನುವಾರ ಏರ್ಪಡಿಸುವದರಿಂದ ನಮ್ಮ ಕ್ಷೌರಿಕ ಭಂದುಗಳು ಅವುಗಳಲ್ಲಿ ಭಾ ಗವಹಿಸಲಾಗದೆ ಸಾಮಾಜಿಕವಾಗಿ , ರಾಜಕೀಯವಾಗಿ ದೂರವೇ ಉಳಿಯುತಿದ್ದಾರೆ.ಇದರಿಂದ ನಮ್ಮ ಜನ ನಾಯಕರಾಗದೆ ಕೇವಲ ತಮ್ಮ ಎಲ್ಲಾ ಶ್ರಮವನ್ನು ತಮ...