ಸವಿತಾ ಮಹರ್ಷಿಯ ವೃತ್ತಾಂತ ವೆಂಕಟಾಚಲಪತಿ.ಪಿ.ಬಿ ದಾವಣಗೆರೆ
ಅದ್ಯಾಯ 25. ಸವಿತಾ ಮಹರ್ಷಿಯ ಜನ್ಮ ವೃತ್ತಾಂತ ಸವಿತಾ ಮಹರ್ಷಿ ಸೃಷ್ಟಿಯ ದೇವರಾದ ಬ್ರಹ್ಮದೇವರು ಬ್ರಹ್ಮಾಂಡದ ಸೃಷ್ಟಿಗೆ ಕೆಲವು ದೇವತೆಗಳ ಸೇವೆ ಅಗತ್ಯವಿತ್ತು. ಆದ್ದರಿಂದ ಬ್ರಹ್ಮ ದೇವರು ಹತ್ತು ಜನ ಪ್ರಜಾಪತಿಗಳನ್ನು ಸೃಷ್ಟಿ ಮಾಡಿದರೆಂದು ಆ ಹತ್ತು ಪ್ರಜಾಪತಿಗಳ ಹೆಸರುಗಳು ಈ ಕೆಳಗಿನಂತಿವೆ: 1. ಮಾರೀಚಿ 2. ಅತ್ರಿ 3. ಆಂಗೀರಸ 4. ಪುಲಹ 5. ಪುಲಸ್ತ್ಯ 6. ಕ್ರಾತ್ರು 7. ವಶಿಷ್ಠ 8. ಪ್ರಾಚೇತಾಸ್ಕ 9. ಬೃಗು 10. ನಾರದ ಸೃಷ್ಟಿಕರ್ತ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬರಾದ ಮಾರಿಚಿ ಋಷಿಯು ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು ಇವರಿಗೆ ಜನಿಸಿದ ಮಗನೇ ಕಶ್ಯಪ ಮುನಿ ಇವರು ಬ್ರಹ್ಮ ನ ಸೃಷ್ಟಿಕಾರ್ಯದಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಇವರಿಗೆ ಅದಿತಿ, ದಿತಿ, ದನು, ಕಲಾ, ದಾನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವಿನುತಾ, ಕಪಿಲ, ಮುನಿ, ಕದ್ರು, ಎಂಬ ಹದಿಮೂರು ಜನ ಹೆಂಡತಿಯರು. ಮಾರಿಚಿಯು ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾಗಿ ಕಶ್ಯಪನಿಗೆ ಜನ್ಮ ನೀಡಿದಳು (ಕಶ್ಯಪರನ್ನು ಕೆಲವೊಮ್ಮೆ ಪ್ರಜಾಪತಿ ಎಂದು ...