005 ಕ್ಷೌರಿಕ ವೃತ್ತಿಯ ಉಗಮ- ಲೇಖನ ಶ್ರೀ ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ
ಕ್ಷೌರಿಕ ವೃತ್ತಿಯ ಉಗಮ
ಲೇಖನ ಶ್ರೀ ವೆಂಕಟಾಚಲಪತಿ.ಪಿ.ಬಿ.ದಾವಣಗೆರೆ

ಸೌಂದರ್ಯ ಪ್ರಜ್ಞೆಯು ಮಾನವನ ಒಂದು ಮುಖ್ಯ ಗುಣ..ಮನುಷ್ಯನನ್ನು ಸುಂದರವಾಗಿ ಕಾಣುಸುವಲ್ಲಿ ಆವನ ಚರ್ಮ ಹಾಗು ಕೂದಲುಗಳು
ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯನು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ದೇಹಿಕ
ಹಿಂಸೆಯಿಲ್ಲದೆ ಚರ್ಮಕ್ಕಿಂತ ಕೂದಲುಗಳನ್ನು ಹಚ್ಚು ಬಳಸುತ್ತಾನೆ. ಕೂದಲನ್ನು ತೆಗೆದು, ಕತ್ತರಿಸಿ, ಶೃಂಗರಿಸಿ ತನ್ನ ಸೇವೆಯನ್ನು
ನೀಡುವ ವೃತ್ತಿಯೇ ಕ್ಷೌರಿಕ ವೃತ್ತಿ, ಕ್ಷೌರಿಕ ವೃತ್ತಿಯು ಇತರ ಸಾಮಾನ್ಯ ವೃತ್ತಿಗಳಂತೆ
ಅಲ್ಲ. ಇದು ತನ್ನದೇ ಆದ ವಿಶೇಷತೆ ಹಾಗೂ ಪ್ರಮುಖ್ಯತೆಗಳನ್ನು ಹೊಂದಿದೆ. ಕ್ಷೌರಿಕರ ಇತಿಹಾಸವು ತುಂಬಾ ಪ್ರಾಚೀನವಾಗಿ ಮತ್ತು
ಆಸಕ್ತಿದಾಯಕವಾಗಿದೆ.
ಶಿಲಾಯುಗದಲ್ಲಿ ಮಾನವರು ತಮ್ಮ ರಕ್ಷಣೆಯ ಉದ್ದೇಶಕ್ಕಾಗಿ ಹಾಗೂ ನಿರಂತರ ಆಹಾರ ಲಭ್ಯತೆಗಾಗಿ ಗುಂಪುಗಳಲ್ಲಿ ವಾಸಿಸುತ್ತಿದ್ದರು. ಅವರು
ಪ್ರಾರಂಭದಲ್ಲಿ ಅಲೆಮಾರಿಗಳಾಗಿ ನಂತರ ಪಶು ಸಂಗೋಪನೆಗಾಗಿ
ಹಾಗೂ ವ್ಯವಸಾಯಕ್ಕಾಗಿ ಒಂದು ಕಡೆ
ವಾಸಿಸಲು ಪ್ರಾರಂಬಿಸಿದರು. ತಮ್ಮ ರಕ್ಷಣೆಯ ದೃಷ್ಟಿಯಿಂದ ಅವರು ಗುಂಪುಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಗುಂಪುಗಳ ಗಾತ್ರವು ಹೆಚ್ಚಾದಾಗ ಗುಂಪಿನ
ಕೆಲಸಗಳನ್ನು ತಮ್ಮ ಅನುಕೂಲಕ್ಕಾಗಿ ಬೇರೆ
ಬೇರೆ ಸದಸ್ಯರಿಗೆ ವಿತರಿಸುತ್ತಿದ್ದರು. ಕೆಲವರು ಆಹಾರಕ್ಕಾಗಿ ಬೇಟೆಯಲ್ಲಿ ತೊಡಗಿದರು, ಕೆಲವರು ಕೃಷಿಯಲ್ಲಿ ಹಾಗೂ ಪಶುಸಂಗೋಪನೆಯಲ್ಲಿ ತೊಡಗಿದರು,
ಕೆಲವರು
ಕೃಷಿ ಮತ್ತು ಬೇಟೆಯಾದಲು ಬೇಕಾದ ಸಾಧನಗಳನ್ನು ತಯಾರಿಸಲು ತೊಡಗಿದರು, ಕೆಲವರು
ಪ್ರಾಣಿಗಳ ಚರ್ಮದಿಂದ ಮತ್ತು ನಾರಿನಿಂದ ಬಟ್ಟೆಗಳನ್ನು ತಯಾರಿಸಲು
ತೊಡಗಿದರು, ಮತ್ತು
ಕೆಲವರು ಗುಂಪುನ ಸದಸ್ಯರ
ಕೂದಲು ಮತ್ತು ಉಗುರುಗಳನ್ನು ಉತ್ತಮ ಸ್ಥಿತಿಯಲ್ಲಿ
ಕಾಪಾಡಿಕೊಳ್ಳಲು, ಕೂದಲು ಮತ್ತು ಉಗುರುಗಳನ್ನು
ಬಾಚುವ, ಕತ್ತರಿಸುವ ಮತ್ತು ಶೃಂಗರಿಸುವ
ಕೆಲಸಗಳಲ್ಲಿ ತೊಡಗಿದರು.
ನಂತರ
ಹಲವಾರು ಗುಂಪುಗಳು ಒಟ್ಟಿಗೆ ಸೇರಿ ಗ್ರಾಮಗಳು ಸೃಷ್ಟಿಯಾಗಿ ಗ್ರಾಮೀಣ ಜೀವನವು ಪ್ರಾರಂಭವಾಯಿತು. ಮನುಷ್ಯನು ಹಲವು ಜನರೊಂದಿಗೆ ಜೀವಿಸಲು ಪ್ರಾರಂಭಿಸಿ ತನ್ನ ಸ್ವಚ್ಚತೆ ಹಾಗೂ ಸೌದರ್ಯದ ಬಗ್ಗೆ
ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದನು. ಇದರಿಂದ ಕ್ಷೌರಿಕ ಸೇವೆಗಳು ಪ್ರಾಮುಖ್ಯತೆ ಪಡೆದು ಕೆಲವರು ಪೂರ್ಣ ಪ್ರಮಾಣವಾಗಿ ಜನರ ಕೂದಲುಗಳನ್ನು
ಉಗುರುಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಕೊಂಡರು. ಕ್ಷೌರಿಕ ಮತ್ತು ಕೇಶ ವಿನ್ಯಾಸಕರ
ಪರಿಕಲ್ಪನೆಯು ಆ ಸಮಯದಲ್ಲಿಯೇ ಪ್ರಾರಂಭವಾಯಿತು ಎಂದೇ ಹೇಳಬೇಕು. ನಂತರ ಸಂಭವಿಸಿದ
ಬದಲಾವಣೆಗಳು ಹೊಸ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯೊಂದಿಗೆ ನಾಗರಿಕತೆಗಳ ಪ್ರಾರಂಭಕ್ಕೆ ಕಾರಣವಾದವು ಹಾಗೂ ಕ್ಷೌರಿಕ ವೃತ್ತಿಯು ನಾಗರಿಕ ಸಮಾಜದ ಅವಿಬಾಜ್ಯ
ಅಂಗವಾಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.
ಆದ್ದರಿಂದ ಕ್ಷೌರಿಕ
ವೃತ್ತಿಯು ಐತಿಹಾಸಿಕ ಪೂರ್ವದಿಂದ ಅಸ್ತಿತ್ವದಲ್ಲಿದ್ದು ಅತ್ಯಂತ ಪುರಾತನ ವೃತ್ತಿಗಳಲ್ಲಿ ಒಂದಾಗಿದೆ ಮತ್ತು ಹಲವು
ಶತಶತಮಾನಗಳು
ಗತಿಸಿದರೂ ಕೆಲವು
ಬದಲಾವಣೆಗಳೊಂದಿಗೆ ಇಂದಿನವರೆಗೂ ಅಸ್ತಿತ್ವದಲ್ಲಿದೆ. ಇಂತಹ ಪುರಾತನ ವೃತ್ತಿಗಳು
ಅತೀ ವಿರಳೆವೆಂದೇ ಹೇಳಬಹುದು.
ಕ್ಷೌರಿಕ ವೃತ್ತಿಯು ಹಲವಾರು ಲಕ್ಷ ವರ್ಷಗಳಿಂದ ಆಸ್ತಿತ್ವದಲ್ಲಿ ಇದ್ದ ಬಗ್ಗೆ ಹಲವಾರು
ಸಾಕ್ಷಿಗಳು ದೊರೆತಿವೆ. ಪ್ರಾಚೀನ ಶಿಲ್ಪಗಳು ಮತ್ತು ವರ್ಣಚಿತ್ರಗಳು ಜನರು ಇನ್ನೊಬ್ಬ ವ್ಯಕ್ತಿಯ ಕೂದಲನ್ನು
ಕತ್ತರಿಸುವ ಮತ್ತು ಅಂದಗೊಳಿಸುವ ಹಲವಾರು
ಸಾಕ್ಷಿಗಳು ದೊರೆತಿವೆ. ಕೂದಲನ್ನು ಕತ್ತರಿಸಲು, ಬಾಚಲು ಶೃಂಗರಿಸಲು ಬಳಸಿದರು
ಎನ್ನಲಾದ ಹಲವಾರು ಪುರಾವೆಗಳು ಲಬ್ಯವಾಗಿವೆ. ಪ್ರಾಚೀನ ನಾಗರಿಕತೆಗಳ ಬಗ್ಗೆ ಅಧ್ಯಯನಕ್ಕಾಗಿ ನಡೆಸಿದ
ಉತ್ಖನನದ ಸಮಯದಲ್ಲಿ ವಿಶೇಷ ಚಿಪ್ಪುಗಳು, ಕಲ್ಲಿನ ರೇಜರ್ಗಳು, ಮರದ ಬಾಚಣಿಕೆಗಳು ಮತ್ತು ಪ್ರಾಣಿಗಳ
ಹಲ್ಲುಗಳು ಹಾಗೂ ಉಗುರಿನಿಂದಾದ ತಯಾರಾದ
ಮೊನಚಾದ
ವಸ್ತುಗಳು ದೊರೆತಿವೆ. ಈಗ ಲಭ್ಯವಿರುವ ಪುರಾವೆಗಳ ಪ್ರಕಾರ, ಕ್ಷೌರಿಕ ವೃತ್ತಿಯ ಇತಿಹಾಸವು ಕನಿಷ್ಠ 6000 ವರ್ಷಗಳಷ್ಟು ಹಿಂದಿನದು ಎಂದು
ದೃಡಪಟ್ಟಿದೆ.
ಮಾನವನ ಇತಿಹಾಸದೊಂದಿಗೆ ಕ್ಷೌರಿಕನ ವೃತ್ತಿಯು ಒಂದು ವಿಶಿಷ್ಟ ಕಲೆ ಮತ್ತು ವೃತ್ತಿಯಾಗಿ ವಿಕಸನಗೊಂಡಿದೆ. ಕ್ಷೌರಿಕರ ವೃತ್ತಿಯು ಇತಿಹಾಸದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ
ಅಂಶಗಳಿಂದ ಪ್ರಭಾವಹೊಂದಿ ವೃತ್ತಿಯಲ್ಲಿ ಹಲವಾರು ಬದಲಾವಣೆಗಳನ್ನು ಕಂಡು ಪ್ರಮುಖ ವೃತ್ತಿಯಾಗಿ ಉಳಿದು ಬಂದಿದೆ.

Super information sir. VPB SIR
ಪ್ರತ್ಯುತ್ತರಅಳಿಸಿ