003 .. ಕ್ಷೌರಿಕ ವೃತ್ತಿಯ ಇತಿಹಾಸ.
ಕ್ಷೌರಿಕ ವೃತ್ತಿಯ ಇತಿಹಾಸ. HISTORY OF BARBERING . ಕ್ಷೌರಿಕ ವೃತ್ತಿಯು ಒಂದು ಪುರಾತನ ವೃತ್ತಿ. ಕ್ಷೌರಿಕರ ಇತಿಹಾಸವು ಬಹಳ ಪುರಾತನ ಹಾಗೂ ಸ್ವಾರಸ್ಯಕರವಾಗಿದೆ. ಆದಿ ಮಾನವನು ತನ್ನ ದೇಹದ ಅನಗತ್ಯ ಕೂದಲುಗಳ ತೊಂದರೆಯಿಂದ ಮುಕ್ತಿ ಪಡೆಯಲು ತಾನು ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡಿರಬಹುದು ಅಥವಾ ತನ್ನ ಸಂಗಾತಿಯ ಸಹಾಯ ಪಡೆದಿರಬಹುದು ಎಂದು ಊಹಿಸಲಾಗುತ್ತದೆ. ಆದ್ದರಿಂದ ಕೂದಲು ಕತ್ತರಿಸುವ ಕ್ರಿಯೆ ಮಾನವನ ಅಸ್ತಿತ್ವದಷ್ಟೇ ಹಿಂದಿನದು. ಈಗ ಲಭ್ಯವಿರುವ ಆಧಾರಗಳ ಪ್ರಕಾರ ಆದಿಮಾನವರು ಕೂದಲು ಕತ್ತರಿಸಲು ವಿಶೇಷ ಬಗೆಯ ಚಿಪ್ಪು ಹಾಗೂ ಹರಿತವಾದ ಕಲ್ಲು ಬಳಸುತ್ತಿದ್ದರೆಂದು ತಿಳಿಯತ್ತದೆ. ಆದರೆ ಕ್ಷೌರಿಕರ ಇತಿಹಾಸವು ಸುಮಾರು 7000 ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾಗುತ್ತದೆ. ಈಜಿಪ್ಟ್ನಲ್ಲಿ ಕ್ರಿಸ್ತಪೂರ್ವ 5000 ವರ್ಷಗಳ ಹಿಂದೆ ಪ್ರಾರಂಭವಾದ ಬಗ್ಗೆ ಪುರಾವೆಗಳಿವೆ. ಪ್ರಾಚಿನ ಇಜಿಪ್ಟ್ ನಲ್ಲಿ ಮೃತವ್ಯಕ್ತಿಯ ಆತ್ಮವು ಮನುಷ್ಯನ ಕೂದಲಿನಿಂದ ಪ್ರವೇಶಿಸುತ್ತದೆ ಎಂದು ನಂಬಿದ್ದರು. ಆ ರೀತಿ ದೇಹದಲ್ಲಿ ಪ್ರವೇಶಿಸಿದ ಆತ್ಮಗಳು ಕೂದಲನ್ನು ಹರಡಿಕೊಂಡು ನೃತ್ಯವನ್ನು ಮಾಡಿ ಕತ್ತರಿಸಿಕೊಂಡರೆ ದೇಹದಿಂದ ಹೊರಗೆ ಹೋಗುತ್ತವೆ ಎಂದು , ಕೂದಲನ್ನು ಕತ್ತರಿಸುವ ಕಾರ್ಯವನ್ನು ಬೇರೆಯವರಿಗೆ ವಹಿಸಿದರೆ ಅವರ ಮಾಟ ಮಂತ್ರಗಳಿಂದ ತೊಂದರೆಯಾಗುತ್ತದೆ ಎಂದು ಭಾವಿಸಿ ಈ ಕಾರ್ಯವನ್ನು...